ಸ್ವತಂತ್ರ ಭಾರತದ ರಾಷ್ಟ್ರರಾಜಕರಣದಲ್ಲಿ ಆದ ಪ್ರತಿ ಬದಲಾವಣೆಯಲ್ಲಿ ಕರ್ನಾಟಕದ ಪಾತ್ರ ಬಲು ಮಹತ್ತರವಾದದ್ದು ಮತ್ತು ಎಲ್ಲ ರಾಜಕೀಯ ಬದಲಾವಣೆಗಳಿಗೆ ಭದ್ರ ಅಡಿಪಾಯ ಹಾಕಿಕೊಟ್ಟಿದ್ದು ಬಲು ಸ್ಪಷ್ಟ. ಇಂದಿರಾಗಾಂಧಿಗೆ ರಾಜಕೀಯ ಪುನರ್ಜನ್ಮ, ತದನಂತರ ಜನತಾಪಕ್ಷಕ್ಕೆ ಕೊಟ್ಟ ಬೆಂಬಲ, ತೃತೀಯ ರಂಗದ ಪರಿಕಲ್ಪನೆ ಹಾಗೂ ಅದರ ಭಾಗಶಃ ಯಶಸ್ಸು, ದಕ್ಷಿಣ ಭಾರತದ ಮೊದಲ ಬಿಜೆಪಿಯ ಸರಕಾರ ಇವೆಲ್ಲವುಗಳೂ ರಾಷ್ಟ್ರ ರಾಜಕಾರಣದಲ್ಲಿ ಕರ್ನಾಟಕದ ಪಾತ್ರದ ಒಂದು ಸಣ್ಣ ಮಜಲು. ಅದರ ಮುಂದುವರಿದ ಭಾಗವಾಗಿ ರೂಪುಗೊಂಡಿದ್ದೆ ಕಾಂಗ್ರೆಸ್-ಜೆಡಿಸ್ ದೋಸ್ತಿ ಸರಕಾರ. ಇಂತಹ ಅಚ್ಚರಿಗಳನ್ನು ಕೊಡುವುದರಲ್ಲಿ ಕರ್ನಾಟಕ ಯಾವತ್ತೂ ಹಿಂದೆ ಬಿದ್ದಿಲ್ಲ. ಹೌದು ಮತ್ತೆ! ಇಡೀ ದಕ್ಷಿಣಭಾರತ ಪರಿವಾರ ಮತ್ತು ಪ್ರಾದೇಶಿಕ ಪಕ್ಷಗಳ ಕಪಿಮುಷ್ಟಿಯಲ್ಲಿ ಇದ್ದಾಗ, ಕರ್ನಾಟಕದಲ್ಲಿ ರಚನೆಗೊಂಡಿತ್ತು ದಕ್ಷಿಣ ಭಾರತದ ಮೊದಲ ಬಿಜೆಪಿಯ ಸರಕಾರ. ಅದರ ಜೊತೆಗೆ ಭಾಜಪಕ್ಕೆ ದಕ್ಷಿಣಭಾರತದ ಹೆಬ್ಬಾಗಿಲು ಎಂಬ ಬಿರುದು. ಅದರ ಜೊತೆಗೆ ಕಾಂಗ್ರೆಸ್ಸಿನ ಭದ್ರಕೋಟೆ ಎಂಬ ಹೆಗ್ಗಳಿಕೆಯನ್ನೂ ಹಾಗೆಯೇ ಉಳಿಸಿಕೊಂಡಿತ್ತು! ಮುಂದೆ ನಡೆದ 2018ರ ಚುನಾವಣೆಯಲ್ಲಿ ನ ಅತಂತ್ರ ಫಲಿತಾಂಶದ ನಂತರ ಆದ ಕಾಂಗ್ರೆಸ್ಸ್-ಜೆಡಿಎಸ್ ದೋಸ್ತಿ ಸರಕಾರ ರಾಷ್ಟ್ರ ರಾಜಕಾರಣಕ್ಕೆ ಆಶ್ಚರ್ಯ ಮತ್ತು ಭಾಜಪಕ್ಕೆ ಆತಂಕ ಒಡ್ಡಿದ್ದು ಎಷ್ಟು ಸತ್ಯವೋ, ಅದಕ್ಕಿಂತಲೂ ಹೆಚ್ಚು ಆಶ್ಚರ್ಯ ಮತ್ತು ಆತಂಕ ಕಾಂಗ್ರೆಸ್ಸ್-ಜೆಡಿಎಸ್ ಪಕ್ಷಗಳ ತಳಮಟ್ಟದ ಕಾರ್ಯಕರ್ತರದ್ದು!
ಸಮಕಾಲೀನ ರಾಜಕೀಯ ಆಗುಹೋಗುಗಳ ಒಳನೋಟ ಮತ್ತು ರಾಜಕೀಯ ಊಹೆ ಮತ್ತು ವಿಶ್ಲೇಷಣೆ. ಎಲ್ಲ ಪಕ್ಷಗಳು ಮತ್ತು ರಾಜಕರಣಿಗಳಿಂದ ಸಮಾನ ಅಂತರ ಮತ್ತು ನೇರ ಬರಹಗಳು. ದಯವಿಟ್ಟು ಬೆಂಬಲಿಸಿ
Comments
Post a Comment