'ಕಾಂಗ್ರೆಸ್ಸ್ ಕಿತ್ತೊಗೆಯಿರಿ, ಪ್ರಜಾತಂತ್ರ ಉಳಿಸಿ' ಎಂಬ ಏಕೈಕ ಘೋಷವಾಕ್ಯದೊಂದಿಗೆ ಹುಟ್ಟಿ ,ಅಧಿಕಾರ ಪಡೆದುಕೊಂಡ ಪಕ್ಷ ಜನತಾ ಪಕ್ಷ, ಈಗಿನ ಜನತಾದಳ. ಸಮಾಜವಾದಿ, ಬಹುಜನಸಮಜವಾದಿ, ಭಾಜಪ, ಶಿವಸೇನೆ, ತೃಣಮೂಲಕಾಂಗ್ರೆಸ್, ದ್ರಾವಿಡ ಪಕ್ಷಗಳು, ತೇಲುಗುದೇಶಮ್ ಪಾರ್ಟಿ ಹೀಗೆ ಸ್ವತಂತ್ರ ಭಾರತದಲ್ಲಿ ಸ್ಥಾಪನೆಗೊಂಡ ಶೇಕಡ 90ರಷ್ಟು ಪಕ್ಷಗಳ ಮೂಲ ಪರಿಕಲ್ಪನೆಯೇ ಕಾಂಗ್ರೆಸ್ಗೆ ರಾಜಕೀಯ ಪರ್ಯಾಯ ಶಕ್ತಿಯಾಗಿ ಬೆಳೆಯಬೇಕೆಂಬುದು ಮತ್ತು ಕಾಂಗ್ರೆಸ್ನ ಮೂಲೋತ್ಪಾಟನೆ. ಕಾರಣಗಳು ಹತ್ತಾರು- 100 ವರ್ಷಗಳ ಪಕ್ಷದ ಇತಿಹಾಸ, ಸ್ವಾತಂತ್ರ್ಯ ಸಂಗ್ರಾಮದ ಮುಂದಾಳತ್ವ, ಗಾಂಧೀಜಿಯ ಪಕ್ಷ ಎಂಬ ಹಿರಿಮೆ, ಸ್ವಾತಂತ್ರ್ಯದ ನಂತರ ನೆಹರೂರವರ ಪಾರುಪತ್ಯ, ಮುಸ್ಲಿಂ ಮತಬ್ಯಾಂಕ್, ಒಡೆದು ಆಳುವ ನೀತಿ, ಇಂದಿರಮ್ಮ ಎಂಬ ಶಕ್ತಿ, ಆಕೆಯ ಕ್ರಾಂತಿಕಾರಿ ಹೆಜ್ಜೆಗಳು, ಸಮರ್ಥ ವಿರೋಧ ಪಕ್ಷದ ಕೊರತೆ... ಎಲ್ಲವುಗಳೂ ಕಾಂಗ್ರೆಸ್ ಎಂಬ ಪಕ್ಷವನ್ನು ದೇಶದ ಹಳ್ಳಿಹಳ್ಳಿಗಳಲ್ಲಿ ತುಂಬಾ ಆಳವಾಗಿ ಬೇರೂರುವಂತೆ ಮಾಡಿದವು. ಆದರೆ ತುರ್ತುಪರಿಸ್ಥಿತಿಯ ನಂತರ ಪರಿಸ್ಥಿತಿ ಬದಲಾಗತೊಡಗಿತು. ಇಂದಿರಮ್ಮ ಎಂಬ ಶಕ್ತಿ ದೇಶಕ್ಕೆ ಮಾರಕವೆನಿಸಿದಳು. ಅದರ ಮೂಲಕ ರಾಜಕೀಯ ಅನುಭವವಿಲ್ಲದ ಪಕ್ಷವೊಂದು ಗದ್ದುಗೆಯ ಮೇಲೆ ಕುಳಿತರೂ, ಅದೇ ಇಂದಿರಳ ರಾಜಕೀಯ ಕುಟೀಲತೆಯಿಂದ...
ಸಮಕಾಲೀನ ರಾಜಕೀಯ ಆಗುಹೋಗುಗಳ ಒಳನೋಟ ಮತ್ತು ರಾಜಕೀಯ ಊಹೆ ಮತ್ತು ವಿಶ್ಲೇಷಣೆ. ಎಲ್ಲ ಪಕ್ಷಗಳು ಮತ್ತು ರಾಜಕರಣಿಗಳಿಂದ ಸಮಾನ ಅಂತರ ಮತ್ತು ನೇರ ಬರಹಗಳು. ದಯವಿಟ್ಟು ಬೆಂಬಲಿಸಿ