'ಕಾಂಗ್ರೆಸ್ಸ್ ಕಿತ್ತೊಗೆಯಿರಿ, ಪ್ರಜಾತಂತ್ರ ಉಳಿಸಿ' ಎಂಬ ಏಕೈಕ ಘೋಷವಾಕ್ಯದೊಂದಿಗೆ ಹುಟ್ಟಿ ,ಅಧಿಕಾರ ಪಡೆದುಕೊಂಡ ಪಕ್ಷ ಜನತಾ ಪಕ್ಷ, ಈಗಿನ ಜನತಾದಳ. ಸಮಾಜವಾದಿ, ಬಹುಜನಸಮಜವಾದಿ, ಭಾಜಪ, ಶಿವಸೇನೆ, ತೃಣಮೂಲಕಾಂಗ್ರೆಸ್, ದ್ರಾವಿಡ ಪಕ್ಷಗಳು, ತೇಲುಗುದೇಶಮ್ ಪಾರ್ಟಿ ಹೀಗೆ ಸ್ವತಂತ್ರ ಭಾರತದಲ್ಲಿ ಸ್ಥಾಪನೆಗೊಂಡ ಶೇಕಡ 90ರಷ್ಟು ಪಕ್ಷಗಳ ಮೂಲ ಪರಿಕಲ್ಪನೆಯೇ ಕಾಂಗ್ರೆಸ್ಗೆ ರಾಜಕೀಯ ಪರ್ಯಾಯ ಶಕ್ತಿಯಾಗಿ ಬೆಳೆಯಬೇಕೆಂಬುದು ಮತ್ತು ಕಾಂಗ್ರೆಸ್ನ ಮೂಲೋತ್ಪಾಟನೆ.
ಕಾರಣಗಳು ಹತ್ತಾರು- 100 ವರ್ಷಗಳ ಪಕ್ಷದ ಇತಿಹಾಸ, ಸ್ವಾತಂತ್ರ್ಯ ಸಂಗ್ರಾಮದ ಮುಂದಾಳತ್ವ, ಗಾಂಧೀಜಿಯ ಪಕ್ಷ ಎಂಬ ಹಿರಿಮೆ, ಸ್ವಾತಂತ್ರ್ಯದ ನಂತರ ನೆಹರೂರವರ ಪಾರುಪತ್ಯ, ಮುಸ್ಲಿಂ ಮತಬ್ಯಾಂಕ್, ಒಡೆದು ಆಳುವ ನೀತಿ, ಇಂದಿರಮ್ಮ ಎಂಬ ಶಕ್ತಿ, ಆಕೆಯ ಕ್ರಾಂತಿಕಾರಿ ಹೆಜ್ಜೆಗಳು, ಸಮರ್ಥ ವಿರೋಧ ಪಕ್ಷದ ಕೊರತೆ... ಎಲ್ಲವುಗಳೂ ಕಾಂಗ್ರೆಸ್ ಎಂಬ ಪಕ್ಷವನ್ನು ದೇಶದ ಹಳ್ಳಿಹಳ್ಳಿಗಳಲ್ಲಿ ತುಂಬಾ ಆಳವಾಗಿ ಬೇರೂರುವಂತೆ ಮಾಡಿದವು. ಆದರೆ ತುರ್ತುಪರಿಸ್ಥಿತಿಯ ನಂತರ ಪರಿಸ್ಥಿತಿ ಬದಲಾಗತೊಡಗಿತು. ಇಂದಿರಮ್ಮ ಎಂಬ ಶಕ್ತಿ ದೇಶಕ್ಕೆ ಮಾರಕವೆನಿಸಿದಳು. ಅದರ ಮೂಲಕ ರಾಜಕೀಯ ಅನುಭವವಿಲ್ಲದ ಪಕ್ಷವೊಂದು ಗದ್ದುಗೆಯ ಮೇಲೆ ಕುಳಿತರೂ, ಅದೇ ಇಂದಿರಳ ರಾಜಕೀಯ ಕುಟೀಲತೆಯಿಂದ ಸರ್ಕಾರ ಬಿದ್ದುಹೋಯಿತು. ಇದರೊಂದಿಗೆ ದೇಶದ ಜನತೆಗೆ ಕಾಂಗ್ರೆಸ್ ಅಗತ್ಯಕ್ಕಿಂತ ಹೆಚ್ಚು ಅನಿವಾರ್ಯವಾಗಿತ್ತು.
ಇಂದಿರಾಳ ಹತ್ಯೆಯ ನಂತರದ ಅನುಕಂಪದ ಅಲೆ ಕಾಂಗ್ರೆಸ್ ಅನ್ನು ಹಳ್ಳಿಯಿಂದ ದಿಲ್ಲಿಯವರೆಗಿನ ಪ್ರತಿಯೊಂದು ಕುರ್ಚಿಯಲ್ಲೂ ಇನ್ನಷ್ಟು ಭದ್ರವಾಗಿ ಕೂರುವಂತೆ .ಮಾಡಿತ್ತು ಮತ್ತು ಕಾಂಗ್ರೆಸ್ ನ ಕುಟುಂಬ ನಿಷ್ಠೆ (ಗುಲಾಮಗಿರಿ) ರಾಜೀವಗಾಂಧಿ ಎಂಬ ವಿಮಾನ ಹಾರಾಟಗಾರನನ್ನು ಪೈಲಟ್ ಸೀಟಿನಿಂದ ಪಿಎಂ ಸೀಟಿನಲ್ಲಿ ಕೂರಿಸಿತ್ತು!
ಆದ್ರೆ ರಾಜೀವ ಗಾಂಧಿಯ ಅನನುಭವಿ ಆಡಳಿತ, ಕಾಂಗ್ರೆಸ್ ಮೊದಲಿನಿಂದ ರೂಢಿಸಿಕೊಂಡು ಬಂದಿದ್ದ ಭ್ರಷ್ಟಾಚಾರ, ಅತಿಯಾದ ಮುಸ್ಲಿಂ ತುಷ್ಟೀಕರಣ, ತದನಂತರದ ರಾಮಂದಿರದ ಚಳವಳಿಗಳ ಪರಿಣಾಮ ದೇಶದಲ್ಲೆಡೆ ಕಾಂಗ್ರೆಸ್ ವಿರೋಧಿ ಗಾಳಿಯೊಂದು ಪ್ರಬಲವಾಗಿ ಬೀಸತೊಡಗಿತ್ತು,ಈ ಗಾಳಿಯಲ್ಲಿ ಹಾರಿಬಂದ ಈಗಿನ ಭಾಜಪ ಮತ್ತು ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಅನ್ನು ಬುಡ ಸಮೇತ ಅಲುಗಾಡಿಸಿದ್ದು ಸುಳ್ಳಲ್ಲ.
ಆದರೆ ಯಾವ ಭ್ರಷ್ಟಾಚಾರಿ , ಕುಟುಂಬ ಪಕ್ಷದ ವಿರುದ್ಧ ಹೋರಾಡಿ ಹೊಸ ಆಶಾಭಾವನೆಗಳನ್ನು ಹುಟ್ಟಿಸಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾದವೋ ಆ ಪಕ್ಷಗಳು ಅಧಿಕಾರ ಬಂದ ಮೇಲೆ ಅದೇ ಕಾಂಗ್ರೆಸ್ ಪಕ್ಷದ ಪಡಿಯಚ್ಚುಗಳಾಗಿ ಬದಲಾಗಿದ್ದವು. ಜನಗಳಿಗೆ ಕಾಂಗ್ರೆಸ್ ನ ನೆನಪೂ ಬಾರದ ಮಟ್ಟಿಗೆ!
ಕಾಲ ಬದಲಾಗಿದೆ. ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಲೆಕ್ಕಕ್ಕೆ ಇಲ್ಲವೆಂಬಂತೆ ಭಾಜಪದ ವಿರುಧ್ಧ ಚುನಾವಣೆ ಎದುರಿಸಲು ಸಜ್ಜಾಗಿವೆ. ಕಾಂಗ್ರೆಸ್ ತನ್ನ ಒಂದುಕಾಲದ ಎದುರಾಳಿ ಪಕ್ಷಕ್ಕೆ ಬೆಷರತ್ ಬೆಂಬಲ ಕೊಡುವ ಮಟ್ಟಕ್ಕಿಳಿದಿದೆ( ಅದೂ ಕೇಳದೆಯೇ!). ಇದೆ ಕಾಂಗ್ರೆಸ್ ದೇವೇಗೌಡರನ್ನು ಪ್ರಧಾನಿ ಕುರ್ಚಿಯಿಂದ ಕೆಳಗಿಳಿಸಿದ್ದು ಇಲ್ಲಿ ಸ್ಮರಿಸಬಹುದು? ತೀರಾ ಇತ್ತೀಚೆಗೆ ಸಂಸತ್ತಿನಲ್ಲಿ ವಿರೋಧ ಪಕ್ಷವೆನಿಸ್ಕೊಳ್ಳಲೂ ಅರ್ಹತೆ ಇಲ್ಲದ ಸ್ಥಿತಿಗೆ ಬಂದು ನಿಲ್ಲಲು ಅದರ ರೂಢಿಗತ ಭ್ರಷ್ಟಾಚಾರ , ಅತಿಯಾದ ಮುಸ್ಲಿಂ ತುಷ್ಟೀಕರಣದಿಂದ ಒಂದಾದ ಬಹುಸಂಖ್ಯಾತ ಮತಗಳು ಮತ್ತು ಕಾಂಗ್ರೆಸ್ನ ಪ್ರಶ್ನಾತೀತ ನಾಯಕರ ಕುಟುಂಬದ ಕುಡಿ ರಾಹುಲ್ ಗಾಂಧಿ ಎಂಬ ಮೂರ್ಖ. ಕಾಂಗ್ರೆಸ್ ಮುಕ್ತ ಭಾರತ ಎಂಬ ಭಾಜಪದ ಘೋಷಣೆಗೆ ಹೋದಲ್ಲಿ ಬಂದಲ್ಲಿ ಅಘೋಷಿತ ಬೆಂಬಲ ನೀಡುತ್ತಿರುವುದು ಇದೆ ರಾಹುಲ ಗಾಂಧಿ.
ಕಾಂಗ್ರೆಸ್ನ ಮುಂದಿರುವ ಏಕೈಕ ದಾರಿ ಹೊಂದಾಣಿಕೆ ರಾಜಕೀಯ 'ಮಹಾಘಟಬಂಧನ' ಎಂಬ ಹೆಸರಿನೊಂದಿಗೆ. ಈ ನಡೆಗೆ ಮೊದಲು ಹೆಗಲು ಕೊಟ್ಟಿದ್ದು ಮತ್ತದೇ ಕರ್ನಾಟಕ ರಾಜಕೀಯ. ಸಿದ್ದರಾಮಯ್ಯ, ಖರ್ಗೆ , ಡಿಕೆಶಿ ಎಂಬ ಜನನಾಯಕರಿದ್ದೂ , ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಜನತಾದಳಕ್ಕೆ ಬೆಷರತ್ ಬೆಂಬಲ ಕೊಡಲು ಏಕೈಕ ಕಾರಣ- atleast ಇಲ್ಲಾದರೂ ಭಾಜಪವನ್ನು ಅಧಿಕಾರದಿಂದ ಹೊರಗಿಡಬೇಕೆಂಬ ತಂತ್ರಗಾರಿಕೆ.
ಇನ್ನು ಈ ಸರ್ಕಾರ ಬೀಳುವುದು ಕಾಂಗ್ರೆಸ್ ಹೊರನಡೆಯುವುದರಿಂದ ಮಾತ್ರ ಸಾಧ್ಯ . ಏಕೆಂದರೆ ಜನತಾದಳ ಅನಿವಾರ್ಯತೆ ಏನು ಕಮ್ಮಿ ಇಲ್ಲ. (ಹೆಚ್ಚಿನ ಮಾಹಿತಿಗಾಗಿ ಓದಿ 'ಗೌಡರದ್ದು ಪಕ್ಕಾ ಶಕುನಿಯ ಆಟ' ). ಸದ್ಯದ ಕಾಂಗ್ರೆಸ್ ಅಂತಹ ಎದೆಗಾರಿಕೆ ತೋರಿಸುವುದು ಪವಾಡವೆ ಸರಿ. ಆದರೆ ಇಂದಿಗೂ ಅದಕ್ಕೆ ತಲೆ ನೋವಾಗಿರುವುದು 'ಯಡಿಯೂರಪ್ಪ ಎಂಬ ಜನನಾಯಕನ ಲಜ್ಜೆಗೇಡಿ ರಾಜಕಾರಣ'.

Comments
Post a Comment