ಜನತಾದಳ(ಸೆಕ್ಯೂಲರ್) ಕಾನೂನಾತ್ಮಕವಾಗಿ ರಚನೆಗೊಂಡ(1999) ನಂತರದ 20 ವರ್ಷಗಳ ಅವಧಿಯಲ್ಲಿ, ಆ ಪಕ್ಷದ ಮುಖ್ಯಮಂತ್ರಿ ಇದ್ದದ್ದು ಕೇವಲ 20 ತಿಂಗಳಿಗೆ ಮಾತ್ರ ಅದು ಬೇರೆಯವರ ಬೆಂಬಲದಿಂದ. ಈ 20 ವರ್ಷದ ಅವಧಿಯಲ್ಲಿ ಕರ್ನಾಟಕದ ಪ್ರಾದೇಶಿಕ ಪಕ್ಷವಾಗಿದ್ದ ಜನತಾದಳ ಕೇವಲ 3 ಜಿಲ್ಲೆಗಳಿಗೆ ಸೀಮಿತವಾಗಿತ್ತು ಮತ್ತು ಪರಿವಾರ ಪಕ್ಷ ಎಂಬ ಹಣೆಪಟ್ಟಿ ಕಟ್ಟಿಕೊಂಡಿತ್ತು. ಒಂದು ಕಾಲದಲ್ಲಿ 16ಕ್ಷೇತ್ರಗಳಲ್ಲಿ ಗೆಲ್ಲಿಸುವುದರ ಮೂಲಕ ದೇವೇಗೌಡರನ್ನು ಪ್ರಧಾನಿಯಾಗಿಸಿದ್ದ ಜನತೆ, ಇಂದು ಆ ಪಕ್ಷದಿಂದ ಅನಾಯಾಸವಾಗಿ ಗೆಲ್ಲಿಸುತ್ತಿರುವುದು ಅವರೊಬ್ಬರನ್ನೆ! ಈ ಅವಧಿಯಲ್ಲಿ ಜನತಾದಳದ ಆಕ್ಸಿಜನ್ ಆಗಿ ಕಾರ್ಯನಿರ್ವಹಿಸಿದ್ದು ಅದೇ ಗೌಡರ ಚದುರಂಗದಾಟ, ಒಕ್ಕಲಿಗ ಮತಗಳು, 20 ತಿಂಗಳ ಕುಮಾರಸ್ವಾಮಿಯ ಆಡಳಿತದ ಜನಪ್ರಿಯತೆ. ಹೀಗಾಗಿ ಜನತಾದಳದ ಉಳಿವಿಗೆ ಇದ್ದದ್ದು ಎರಡೇ ದಾರಿ. ಮೊದಲನೆಯದು ಹೇಗಾದರೂ ಮಾಡಿ ಸರಕಾರದ ಭಾಗವಾಗುವುದು, ಎರಡನೆಯದು ಅದರ ಮೂಲಕ ಗರಿಷ್ಠ ಲಾಭ ಪಡೆಯುವುದು. ಮೊದಲನೆಯದ್ದು ಭಾಜಪದ ಜೊತೆಗಿದ್ದರು ಆಗುತ್ತಿತ್ತು ಆದರೆ ಲಾಭ ಮಾತ್ರ ಸ್ವಲ್ಪ ಕಮ್ಮಿಯಾಗುತ್ತಿತ್ತು. ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಪಟ್ಟ , ಕುಮಾರಸ್ವಾಮಿಯನ್ನು ಅನಿವಾರ್ಯವಾಗಿ ದೆಹಲಿಗೆ ಕಳಿಸಿಕೊಡುವ ರಿಸ್ಕು, ಅಕಸ್ಮಾತ್ ನಡುವೆ ಸರಕಾರ ಬೀಳಿಸಿದರೆ...
ಸಮಕಾಲೀನ ರಾಜಕೀಯ ಆಗುಹೋಗುಗಳ ಒಳನೋಟ ಮತ್ತು ರಾಜಕೀಯ ಊಹೆ ಮತ್ತು ವಿಶ್ಲೇಷಣೆ. ಎಲ್ಲ ಪಕ್ಷಗಳು ಮತ್ತು ರಾಜಕರಣಿಗಳಿಂದ ಸಮಾನ ಅಂತರ ಮತ್ತು ನೇರ ಬರಹಗಳು. ದಯವಿಟ್ಟು ಬೆಂಬಲಿಸಿ