ಎಲ್ಲರಿಗೂ ನಮಸ್ಕಾರ. ನನ್ನ ಹೆತ್ತವರ ಆಶಿರ್ವಾದದೊಂದಿಗೆ, ಗುರು ಹಿರಿಯರು ಕಲಿಸಿದ ಅದರ್ಶಗಳೊಂದಿಗೆ, ನಾನು ಆರಾಧಿಸುವ ಆದರ್ಶ ಜೀವಿಗಳ ಹಾರೈಕೆಯೊಂದಿಗೆ, ನನ್ನಂತಹ ಅಲ್ಪನಲ್ಲಿ ನೆಲೆಸಿರುವ (ಭಾಗಶಃ) ತಾಯಿ ಸರಸ್ವತಿಯ ಕೃಪೆಯಿಂದ ಹಾಗೂ ಇದನ್ನು ಓದುತ್ತಿರುವ ತಮ್ಮೆಲ್ಲರ ಪ್ರೀತಿಯೊಂದಿಗೆ ನನ್ನ ಮೊದಲ ಬರಹವನ್ನು ಆರಂಭಿಸುತ್ತಿದ್ದೇನೆ. ಚಿಕ್ಕಂದಿನಿಂದ ಓದುತ್ತಿರುವ ಪತ್ರಿಕೆಗಳು, ನನ್ನ ಅಜ್ಜನಿಂದ ಬರುತ್ತಿದ್ದ ರಾಜಕೀಯ ವಿಮರ್ಶೆಗಳು, ವಿಚಾರ ಮಂಥನ ನನ್ನ ಮನಸ್ಸಿನಲ್ಲಿ ಅಷ್ಟು ದೊಡ್ಡ ಮಟ್ಟದಲ್ಲಿ ಅಲ್ಲದಿದ್ದರೂ ಒಂದು ಸಣ್ಣ ರಾಜಕೀಯ ಸೆಳೆಯನ್ನು ಸೃಷ್ಟಿಸಿದ್ದಲರಲ್ಲಿ ಎರಡು ಮಾತಿಲ್ಲ. ಆ ಸೆಳೆಯು ನನ್ನನ್ನು ರಾಜಕೀಯ ಸೂಕ್ಷ್ಮಗಳನ್ನು ಅವಲೋಕಿಸುವಲ್ಲಿ, ರಾಜಕೀಯ ಮೇಲಾಟಗಳನ್ನು ಊಹಿಸುವುದರಲ್ಲಿ ಸ್ವಲ್ಪ ಮಟ್ಟಿನ ಯಶಸ್ಸು ತಂದುಕೊಟ್ಟಿರುವುದು ನನ್ನ ವೈಯಕ್ತಿಕ ಅನುಭವ. ಈ ವಿಚಾರ ವೈರುಧ್ಯಗಳನ್ನು , ಸಮಕಾಲೀನ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದ ಆಗುಹೋಗುಗಳನ್ನು, ಅವುಗಳ ಒಳನೋಟಗಳನ್ನು ನನಗೆ ತಿಳಿದ ಮಟ್ಟಿಗೆ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಬೇಕೆಂದು ನನ್ನ ಆಶಯ. ಈ ಆಶಯಕ್ಕೆ ತಮ್ಮೆಲ್ಲರ ಸಹಕಾರ ಕೋರುತ್ತೇನೆ. ತಪ್ಪಾದಲ್ಲಿ ತಿದ್ದುತ್ತ, ಸರಿಯಿದ್ದರೆ ಆಶೀರ್ವದಿಸುತ್ತ ತಮ್ಮ ಪ್ರೋತ್ಸಾಹ ನೀಡಬೇಕು ಎಂದು ವಿನಂತಿಸುತ್ತೇನೆ, ಧನ್ಯವಾದಗಳು.
Comments
Post a Comment