ಬಿಡಿ . ರಾಜಕಾರಣವೇ ಅತಿ ಲಜ್ಜೆಗೆಟ್ಟ ಕ್ಷೇತ್ರಗಳಲ್ಲಿ ಒಂದು. ಸಂಶೋಧನಾ ಕ್ಷೇತ್ರದಲ್ಲಿ ಮುಂದುವರೆಯಲು ಸಂಶೋಧನಾ ಮನೋಭಾವ, ಕ್ರೀಡಾಕ್ಷೇತ್ರದಲ್ಲಿನ ಸಾಧನೆಗೆ ಕ್ರೀಡಾ ಮನೋಭಾವದ ಅವಶ್ಯಕತೆಯ ಹಾಗೆ ರಾಜಕಾರಣದಲ್ಲಿ ಬೆಳೆಯಲು ಲಜ್ಜೆಬಿಟ್ಟ ಮನೋಭಾವ ತುಸು ಹೆಚ್ಛೇ ಇರಬೇಕು. ಶೇಖಡ ತೊಂಬತ್ತೊಂಬತರಷ್ಟು ರಾಜಕಾರಣಿಗಳದ್ದು ಇದೆ ಪ್ರಿನ್ಸಿಪಲ್. ಮೂರು ಬಿಟ್ಟೋರು ಊರಿಗೆ ದೊಡ್ಡೋರು, ಸ್ವಲ್ಪ ಜಾಸ್ತಿ ಬಿಟ್ಟೋರು ರಾಜಕಾರಣಿಗಳು.
ಇನ್ನು ಈ ಗುಂಪಿನಿಂದ ಯಡಿಯೂರಪ್ಪನವರೂ ಹೊರತಾಗಿಲ್ಲ. ಜನಪ್ರಿಯ ಮುಖ್ಯಮಂತ್ರಿ, ವೀರಶೈವರ ಪ್ರಶ್ನಾತೀತ ರಾಜಕೀಯ ನಾಯಕ, ಮಣ್ಣಿನ ಮಗ, ರೈತಪರ ಹೋರಾಟಗಾರ ಬರಿ ಇವಿಷ್ಟುಗಳಿಂದಲೇ ಅವರ ರಾಜಕೀಯ ಜೀವನ ಬರೆದು ಮುಗಿಸುವಂತಹದಲ್ಲ. ರಾಜ್ಯದ ಮುಖ್ಯಮಂತ್ರಿಯಾಗಿ ಜೈಲುವಾಸ, ಆಪರೇಷನ್ ಕಮಲದ ಕಿಂಗ್ಪಿನ್, 20 -20 ಎಂಬ ಅಸಹ್ಯ ರಾಜಕೀಯ ಒಪ್ಪಂದದ ಭಾಗೀದಾರ, ಆರ್ ಎಸ್ ಎಸ್ ಸಿದ್ಧಾಂತದ ವಿರುದ್ಧವಾಗಿ ಟಿಪ್ಪು ಒಬ್ಬ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳಿದ್ದವರು. ಯಡಿಯೂರಪ್ಪನವರು ಒಂಥರ ಎರಡು ನಾಲಿಗೆ ಹಾವಿನ ಜಾತಿಗೆ ಸೇರಿದವರು. ಸರಕಾರದ ವಿರುದ್ಧದ ಹೋರಾಟ, ಪಕ್ಷ ಸಂಘಟನೆ, ಚುನಾವಣೆ ಅಂತ ಬಂದಾಗ ಅವರಲ್ಲಿರುವ ಸಿದ್ಧಾಂತ , ಸದ್ಗುಣಗಳು ಮುಖ್ಯಮಂತ್ರಿ ಕುರ್ಚಿ ನೋಡಿದೊಡನೆ ಅದರ ಬುಡಕ್ಕೆ ಹೋಗಿ ಕುಳಿತುಕೊಂಡಿರುತ್ತವೆ. ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂಬ ಘೋಷವಾಕ್ಯ ಮರೆತುಹೋಗಿರುತ್ತದೆ. ಒಂಥರ ದುರ್ಯೋಧನನ ಮನಸ್ಥಿತಿ , 'ಸಿಂಹಾಸನ ಸಿಕ್ಕರೆ ಮಾತ್ರ ನಾನು ಧರ್ಮ ಆಚರಿಸಬಲ್ಲೆ ' ಅಂದ ಹಾಗೆ!
2008ರ ಚುನಾವಣೆಯ ನಂತರ ಅವರು ಇಟ್ಟ ರಾಜಕೀಯ ನಡೆಗಳು ಸ್ವತಃ ಅರ್ಧದಷ್ಟು ಭಾಜಪ ಕಾರ್ಯಕರ್ತರಿಗೆ ಅಸಹ್ಯ ಹುಟ್ಟಿಸಿತ್ತು, ಇನ್ನುಳಿದ ಅರ್ಧದಷ್ಟು ಕಾರ್ಯಕರ್ತರು ಯಡಿಯೂರಪ್ಪನವರ ಕಟ್ಟಾ ಅಭಿಮಾನಿಗಳು! 20-20 ಎಂಬ ಹೇಸಿಗೆಯ ಕುರ್ಚಿ ಆಟ ರಾಷ್ಟ್ರಮಟ್ಟದಲ್ಲಿ ಭಾಜಪದ ಮಾನ ಮರ್ಯಾದೆ ಹರಾಜು ಹಾಕುವ ಮಟ್ಟಿಗೂ ಉಳಿಸಿರಲಿಲ್ಲ. ಯಾವ ಕುರ್ಚಿಗಾಗಿ ಗೌಡರೆದುರಿಗೆ ಹಲ್ಲುಕಿಸಿದು ನಿಂತಿದ್ದರೋ, ಕುರ್ಚಿ ಸಿಗದಿದ್ದಾಗ ಅವರನ್ನು ಲಿಂಗಾಯತರ ವಿರೋಧಿಯನ್ನಾಗಿ ಬಿಂಬಿಸಿದರು.
ತದನಂತರದ ಚುನಾವಣೆಯಲ್ಲಿ 110 ಸ್ಥಾನ ಮತ್ತು 3 ಪಕ್ಷೇತರರ ಬೆಂಬಲದೊಂದಿಗೆ ಸುಭದ್ರ ಸರಕಾರ ನಡೆಸುವಾಗಲೂ ಅವರೊಳಗಿನ ಅಭದ್ರತೆಯ ಭಾವ ಆಪರೇಷನ್ ಕಮಲ ಮಾಡಲು ಪ್ರೇರೇಪಿಸಿತ್ತು, ಗಣಿ ಧೂಳನ್ನು ಮೈಗೆ ಅಂಟಿಸಿತ್ತು. ಆಪರೇಷನ್ ಯಶಸ್ವಿ ಆದರೂ ಕಾಂಗ್ರೆಸ್ಸ್ ಹೈಕಮಾಂಡ್ ಕಣ್ಣು ಕುಕ್ಕಿತ್ತು, ಇದೇ ಆಪರೇಷನ್ ಅವರು ಜೈಲಿಗೆ ಹೋಗುವಂತೆ ಮಾಡಿತ್ತು.
ಪಕ್ಷದೊಳಗಿನ ಶಾಸಕರ ಬೆಂಬಲದ ದುರಹಂಕಾರ ಎರಡೆರಡು ಮುಖ್ಯಮಂತ್ರಿಗಳ ಬದಲಾವಣೆ ಮಾಡಿಸುವಂತಾಗಿತ್ತು. 2008 ರಲ್ಲಿ ಎಬ್ಬಿಸಿದ್ದ ಲಿಂಗಾಯತ ಮುಖ್ಯಮಂತ್ರಿ ಎಂಬ ಕೂಗು, ಸಮುದಾಯದ ಬೆಂಬಲ ಅವರೊಂದಿಗೆ ಶಾಶ್ವತವಾಗಿಸಿತ್ತು. ಅದೇ ಹುಂಬತನದೊಂದಿಗೆ ಕೆಜೆಪಿ ಪಕ್ಷ ಕಟ್ಟಿ, ತಾವೂ ಸೋತು, ರಾಜಕೀಯ ಪರಾಮವೈರಿ ಪಕ್ಷ ಕಾಂಗ್ರೆಸ್ಸ್ ಅನ್ನು ಅಧಿಕಾರದಲ್ಲಿ ತಂದು ಕೂರಿಸಿದ್ದರು, ಅಧಿಕಾರಕ್ಕಾಗಿ ನಕಲಿ ಜಾತ್ಯತೀತರಾಗಿ ಬದಲಾಗಿಬಿಟ್ಟಿದ್ದರು.
ಆದರೆ ಮರಳಿ ಪಕ್ಷಕ್ಕೆ ಸೇರಿದ ನಂತರ ಅವರ ಸರಕಾರದ ವಿರುದ್ಧದ ಹೋರಾಟಗಳು, ರಾಜ್ಯಾದಂತ ಎಡೆಬಿಡದ ಪ್ರವಾಸಗಳು, ಪರಿವರ್ತನಾ ಯಾತ್ರೆ, ಮತ್ತದೇ ಲಿಂಗಾಯತ ಮುಖ್ಯಮಂತ್ರಿ ಕೂಗು ಯಡಿಯೂರಪ್ಪನವರನ್ನು ಅಧಿಕಾರದ ಹತ್ತಿರಕ್ಕೆ ತಂದು ನಿಲ್ಲಿಸಿತ್ತು.
ಚುನಾವಣೆಯ ನಂತರ ಇನ್ನೇನು ಹಳೆ ಹೆಂಡತಿ ಪಾದವೇ ಗತಿ ಎಂಬಂತೆ ಮತ್ತೆ ಕೈ ಹಾಕಿದ್ದು ಅದೇ ಆಪರೇಷನ್ ಕಮಲಕ್ಕೆ. ಇಂದಿಗೂ ಆಪರೇಷನ್ ಮಾಡುತ್ತಲೇ ಇದ್ದಾರೆ, ಕೇವಲ ಒಂದೇ ಹುಳು ಹೊರತೆಗೆಯಲು ಸಾಧ್ಯವಾಗಿದ್ದು! ಇನ್ನೂ 15 ಹುಳುಗಳನ್ನು ಅದ್ಯಾವಾಗ ಹೊರಗೆ ತೆಗೆಯುತ್ತಾರೋ ಆ ದೇವರೇ ಬಲ್ಲ. ಹಂಗೂಹಿಂಗೂ ಮೈತ್ರಿ ಸರ್ಕಾರ 5 ವರ್ಷ ಪೂರ್ತಿಗೊಳಿಸಿದರೂ ಆಶ್ಚರ್ಯವೇನಿಲ್ಲ. ಏಕೆಂದರೆ ಯಡಿಯೂರಪ್ಪ ನವರು ನಂಬಿರುವ ಆ ಶಾಸಕರ್ಯಾರೂ ಸರಕಾರ ಬೀಳಿಸುವ ತಾಕತ್ತು ಹೊಂದಿದವರಲ್ಲ, ಮಂತ್ರಿ ಸ್ಥಾನಕ್ಕಾಗಿ ಮತ್ತೆ ಚುನಾವಣೆಗೆ ಹೋಗುವಷ್ಟು ಮೂರ್ಖರಲ್ಲ? ಮಂತ್ರಿಸ್ಥಾನಕ್ಕಾಗಿ ತಮ್ಮ ವರಿಷ್ಠರೆದುರಿಗೆ ಒಬ್ಬ ಮುದಿ ಗುಮ್ಮನಂತೆ ಬಳಸಿಕೊಳ್ಳುತ್ತಿದ್ದಾರೆ. ಇನ್ನು ಹಿಡಿದು ಎಳೆದುಕೊಂಡು ಹೋಗುವ ಶಕ್ತಿ ಮತ್ತು ಚಾಕಚಕ್ಯತೆ ಆ ಗುಮ್ಮನಲ್ಲೂ ಉಳಿದಿಲ್ಲ!

Comments
Post a Comment