Skip to main content

ಪಾಕಿಸ್ತಾನ ಮೋದಿಗೆ ಹೆದರಿಬಿಡ್ತಾ?...

-ವಾಟ್ಸಾಪ್ ಸಂದೇಶ -

ಹಾಗಾದ್ರೆ ಪಾಕಿಸ್ತಾನ ಮೋದಿಗೆ ಹೆದರಿಬಿಡ್ತ, ಛಾನ್ಸೇ ಇಲ್ಲ ನೋ ವೇ ಅದು ಯಾವತ್ತಿದ್ರೂ ಭಯೋತ್ಪಾದಕರ ರಾಷ್ಟ್ರ ಅದು ಬದಲಾಗುತ್ತೆ ಅಂದ್ರೆ ನಂಬೋಕಾಗುತ್ತಾ ಸಾಮಿ...

ಇವತ್ತು ಅಭಿನಂದನ್ ರವರನ್ನು ಸುರಕ್ಷಿತವಾಗಿ ವಾಪಾಸ್ ಕಳಿಸಲು ಮೋದಿ ಸರ್ಕಾರದ ರಾಜತಾಂತ್ರಿಕತೆಯೇ ಹೊರತು ಪಾಕಿಸ್ತಾನ ಸ್ವಯಂ ಪ್ರೇರಿತವಾಗಿ ಶಾಂತಿ ಬಯಸಿ ನಮ್ಮ ಯೋಧನನ್ನು ವಾಪಾಸ್ ಕಳಿಸುತ್ತಿಲ್ಲ...

ಇದು ಜಿನಿವಾ ಒಪ್ಪಂದಕ್ಕೆ ಬೆಲೆ ಕೊಟ್ಟು ಬಿಡುಗಡೆ ಮಾಡಿದ್ದು ಇದರಲ್ಲಿ ಮೋದಿ ಪಾತ್ರವಿಲ್ಲ ಅನ್ನೊ ತಿರ್ಬೋಕಿಗಳಿಗೆ ಒಂದ್ ಪ್ರಶ್ನೆ, 1999 ರಲ್ಲಿ ಕ್ಯಾಪ್ಟನ್ ಸೌರಭ್ ಕಾಲಿಯಾ ಮತ್ತು ಅವರ ಟೀಮನ್ನು ಪಾಕ್ ಸೇನೆ ಅಪಹರಿಸಿಕೊಂಡು ಹೋಗಿ ಚಿತ್ರಹಿಂಸೆ ಕೊಟ್ಟು ಸಾಯಿಸಿ ಅವರ ದೇಹದ ತುಂಡುಗಳನ್ನ ಭಾರತಕ್ಕೆ ರವಾನೆ ಮಾಡಿ ವಿಕೃತಿ ಮೆರೆದಾಗ ಜಿನಿವಾ ಒಪ್ಪಂದ ನೆನಪಾಗಲಿಲ್ವ ...

ಅವತ್ತು ಪಾಕಿಸ್ತಾನ ಇಂತಹ ವಿಕೃತಿ ಮೆರೆಯೋದಿಕ್ಕೆ ಬಹುಮುಖ್ಯ ಕಾರಣ ಆ ದೇಶಕ್ಕೆ ಬೆನ್ನೆಲುಬಾಗಿ ನಿಂತಿದ್ದ ಇಸ್ಲಾಮಿಕ್ ರಾಷ್ಟ್ರಗಳು, ಮಿಲಿಯನ್ನುಗಟ್ಟಲೆ ಹಣ ಪುಕ್ಕಟೆ ಬರುತ್ತಿರುವಾಗ ಭಯೋತ್ಪಾದಕರನ್ನು ಸಾಕಲು ಇನ್ನೇನ್ ಬೇಕು ಹೇಳಿ, ಇದೇ ಹಂದಿಗಳನ್ನ ಇಟ್ಕೊಂಡು ಕಾಶ್ಮೀರದಲ್ಲಿ ದಾಳಿ ಮಾಡುತ್ತಲೇ ಕೊನೆಗೆ ಯುದ್ಧ ಮಾಡುವ ಹುಚ್ಚು ಸಾಹಸಕ್ಕೆ ಇಳಿದಿದ್ದು, ಆಮೇಲೆ ಅಟಲ್ ಸರ್ಕಾರದ ದಿಟ್ಟತನದ ನಿರ್ಧಾರಗಳು ಮತ್ತು ನಮ್ಮ ಸೇನೆಯ ಹೋರಾಟದಿಂದ ನಾವು ಕಾರ್ಗಿಲ್ ಯುದ್ಧ ಗೆದ್ದಿದ್ದು...

ಅವತ್ತು ಸೌರಭ್ ಕಾಲಿಯಾರನ್ನ ಕೊಂದಂತೆ ಇವತ್ತು ಅಭಿನಂದನ್ ರವರನ್ನು ಸಹ ಪಾಕ್ ಕೊಲೆ ಮಾಡಬಹುದಿತ್ತು ಯಾಕ್ ಮಾಡ್ಲಿಲ್ಲ ಹೇಳಿ ಅದ್ರಲ್ಲೂ ಒಪ್ಪಂದದ ಪ್ರಕಾರ ಹತ್ ದಿನದ ಒಳಗೆ ಕಳಿಸಬೇಕು ಅನ್ನೊ ನಿಯಮ ಇದ್ರೂ ಎರಡೇ ದಿನಕ್ಕೆ ಪಾಕಿಸ್ತಾನ ಯೋಧನನ್ನು ಕಳಿಸಲು ನಿರ್ಧರಿಸಿದ್ದೇಕೆ ?

ಹೌದು ಮೋದಿಯ ಚಾಣಾಕ್ಷತನ ,ನಿರ್ಮಲ ಸೀತಾರಾಮನ್ ರವರ ದಿಟ್ಟತನ, ಸುಷ್ಮಾ ಸ್ವರಾಜ್ ರವರ ಅತ್ಯುತ್ತಮ ವಿದೇಶಾಂಗ ನೀತಿಯಿಂದ ಇವತ್ತು ಅಭಿನಂದನ್ ರವರು ಸುರಕ್ಷಿತವಾಗಿ ಭಾರತಕ್ಕೆ ಬರುತ್ತಿದ್ದಾರೆ...

ಮೋದಿ ತಲೆಯಲ್ಲಿ ಅದೆಂಥಾ ಮೆದುಳು ಇದೆಯೋ ಗೊತ್ತಾಗ್ತಿಲ್ಲ, ಅವತ್ತು ಅಟಲ್ ಸರ್ಕಾರ ಇರುವ ಸಂದರ್ಭದಲ್ಲಿ ಯಾವ್ಯಾವ ಇಸ್ಲಾಮಿಕ್ ರಾಷ್ಟ್ರಗಳು ಪಾಕಿಸ್ತಾನಕ್ಕೆ ಬೆಂಬಲವಾಗಿ ನಿಂತಿದ್ವೊ ಅವೆಲ್ಲಾ ರಾಷ್ಟ್ರಗಳು ಇವತ್ತು ಪಾಕಿಸ್ತಾನದಿಂದ ಅಂತರ ಕಾಯ್ದುಕೊಂಡಿವೆ ಅದ್ರಲ್ಲೂ ಪಾಕಿಸ್ತಾನವನ್ನ ದತ್ತು ತೆಗೆದುಕೊಂಡು ಸಾಕ್ತಿದ್ದ ಚೀನಾವನ್ನೇ ಈ ವಿಷಯದಲ್ಲಿ ತಟಸ್ಥ ಮಾಡ್ಬಿಟ್ರು ನಮ್ಮ ಸುಷ್ಮಾ ಸ್ವರಾಜ್ ರವರು...

ಇರಾನ್ ಜೊತೆಗೆ ತೈಲ ಒಪ್ಪಂದ ಮಾಡಿಕೊಂಡು ಇತ್ತ ದುಬೈ ಶೇಕ್ ಜೊತೆ ಗೆಳೆತನ ಬೆಳೆಸಿ ಅತ್ತ ಅಫ್ಘಾನಿಸ್ಥಾನದವರಿಗೆ ಸಂಸತ್ ಕಟ್ಟಿಸಿಕೊಟ್ಟು ಸಾಲದ್ದಕ್ಕೆ ಒಂದು ಅಣೆಕಟ್ಟು ಕಟ್ಟಿಸಿಕೊಟ್ಟು ಭಾರತ ಅಂದ್ರೆ ಸಾಕು ಎದ್ದು ನಿಂತು ಗೌರವ ಕೊಡ್ಬೇಕು ಅನ್ನೋ ಮಟ್ಟಿಗೆ ಇಸ್ಲಾಂ ರಾಷ್ಟ್ರಗಳನ್ನ ಬದಲಾಯಿಸಿಬಿಟ್ಟರು ಮೋದಿ...

ಇನ್ನು ಅಮೆರಿಕ ದೇಶಕ್ಕೆ ಪಾಕಿಸ್ತಾನದ ತಗಡು ಬುದ್ಧಿಯನ್ನ ದಾಖಲೆ ಸಮೇತ ತೋರ್ಸಿ ಅಲ್ಲಿಂದ ಬರ್ತಿದ್ದ ಮಿಲಿಯನ್ನುಗಟ್ಟಲೆ ಅನುದಾನವನ್ನ ನಿಲ್ಲಿಸಿಬಿಟ್ರು ಒಟ್ನಲ್ಲಿ ಪಾಕಿಸ್ತಾನ ದಿವಾಳಿ ಹಂತಕ್ಕೆ ಬರುವಂತೆ ಮಾಡಿ ಅದು ಇನ್ಮೇಲೆ ಯುದ್ಧ ಮಾಡೋಕೆ ಹೆದರ್ಬೇಕು ಆ ತರ ಮಾಡ್ಬಿಟ್ರು ಮೋದಿ...

ಈಗ ಪಾಕಿಸ್ತಾನ ಹೆದರಿರೋದು ಮೋದಿಯ ರಾಜತಾಂತ್ರಿಕತೆಗೆ, ಅಕಸ್ಮಾತ್ ಯುದ್ಧ ಶುರುವಾದರೆ ಇಸ್ಲಾಂ ರಾಷ್ಟ್ರಗಳು ಭಾರತಕ್ಕೆ ಬೆಂಬಲ ಕೊಡದೆ ಇದ್ರು ತಟಸ್ಥ ನಿಲುವನ್ನು ಅನುಸರಿಸುವುದು ಪಕ್ಕಾ ಅನ್ನೋದು ಗೊತ್ತಾಯ್ತು, ಇಸ್ಲಾಂ ರಾಷ್ಟ್ರ ಅಂದ್ರೆ ಸಾಕು ಬಗ್ಸಿ ಬಡಿಯೋಣ ಬನ್ನಿ ಅಂತ ಬರುವ ಇಸ್ರೇಲ್ ಈ ಬಾರಿ ಮೋದಿಗೆ ಬಹಿರಂಗವಾಗಿಯೇ ಬೆಂಬಲ ಕೊಡ್ತೀವಿ ಅಂತ ಹೇಳಿದ್ದು ಕೇಳಿ ಇಮ್ರಾನ್ ಚಡ್ಡಿ ಒದ್ದೆ ಮಾಡ್ಕೊಂಡ್ರು, ಇನ್ನು ಭಾರತದ ಪರ ನಿಂತ ಅಂತರಾಷ್ಟ್ರೀಯ ವಲಯ ಒತ್ತಡ ಹೇರಲು ಶುರು ಮಾಡಿದ್ಮೇಲೆ ಅಭಿನಂದನ್ ಇಲ್ಲಿರುವಷ್ಟು ದಿನ ನಮಗೆ ಸಮಸ್ಯೆ ಜಾಸ್ತಿಯಾಗುತ್ತೆ ಅನ್ನೋದನ್ನ ಅರಿತ ಪಾಕಿಸ್ತಾನ ಮೇಲ್ನೋಟಕ್ಕೆ ಶಾಂತಿ ಬಯಸಿ ಬಿಡುಗಡೆ ಮಾಡ್ತಿದಿವಿ ಅಂತ ಬಿಲ್ಡಪ್ ಕೊಡ್ತಿದೆ ಅಷ್ಟೇ...

ಅಕಸ್ಮಾತ್ ಪಾಕಿಸ್ತಾನ ನಿಜ್ವಾಗ್ಲೂ ಬದಲಾಗಿದ್ರೆ ತನ್ನ ಒಡಲಲ್ಲಿ ಸಾಕಿರುವ ಭಯೋತ್ಪಾದಕರನ್ನ ಹೊಡೆದು ಹಾಕ್ಬೇಕು ಇಲ್ಲದಿದ್ರೆ ಗಡಿಪಾರು ಮಾಡ್ಬೇಕು ,ಇದೆಲ್ಲಾ ಮಾಡದೆ ಒಬ್ಬ ಯೋಧನನ್ನು ಭಯದಿಂದ ಬಿಡುಗಡೆ ಮಾಡಿ ಶಾಂತಿ ಬಯಸ್ತಾ ಇದಿವಿ ಅಂತ .  ಪುಂಗಿ ಊದಿದ್ರೆ ನಂಬೋರ್ ಯಾರು?

ಯುಧ್ಧದ ದಾಹದಲ್ಲೇ ಬದುಕ್ತಿದ್ದ ದೇಶವೇ ಯುದ್ಧ ಬೇಡ ಅನ್ನುವಷ್ಟರ ಮಟ್ಟಿಗೆ ಭಾರತವನ್ನು ತನ್ನ ಚಾಣಾಕ್ಷತನದಿಂದ ಬಲಿಷ್ಠವಾಗಿ ಕಟ್ಟುತ್ತಿರುವ ಮೋದಿಗೆ ಗೆಲುವಿನ ಕ್ರೆಡಿಟ್ಸ್ ಕೊಡ್ಲೇಬೇಕು...

ರಾಜಕೀಯಕ್ಕೆ ಬರುವುದಾದರೆ ಚುನಾವಣಾ ಹೊತ್ತಿನಲ್ಲಿ ಅಗಬಹುದಾದ ದೊಡ್ಡ ಹಿನ್ನಡೆಯನ್ನ ಮೋದಿ ಸಮರ್ಥವಾಗಿ ನಿಭಾಯಿಸಿದ್ದಾರೆ! ಕುತೂಹಲಕ್ಕೆ ಒಂದು ಪ್ರಶ್ನೆ 'ಕಾಂಗ್ರೆಸ್ ನವರೆ what next?'

Comments